ಅನ್ನಮಯ್ಯ ಕೀರ್ತನ ಫಾಲ ನೇತ್ರಾನಲ
ಫಾಲನೇತ್ರಾನಲ ಪ್ರಬಲ ವಿದ್ಯುಲ್ಲತಾ ಕೇಳೀ ವಿಹಾರ ಲಕ್ಷ್ಮೀನಾರಸಿಂಹಾ ॥ ಪ್ರಳಯಮಾರುತ ಘೋರ ಭಸ್ತ್ರೀಕಾಪೂತ್ಕಾರ ಲಲಿತ ನಿಶ್ವಾಸಡೋಲಾ ರಚನಯಾ । ಕೂಲಶೈಲಕುಂಭಿನೀ ಕುಮುದಹಿತ ರವಿಗಗನ- ಚಲನ ವಿಧಿನಿಪುಣ ನಿಶ್ಚಲ ನಾರಸಿಂಹಾ ॥ ವಿವರಘನವದನ ದುರ್ವಿಧಹಸನ ನಿಷ್ಠ್ಯೂತ- ಲವದಿವ್ಯ ಪರುಷ ಲಾಲಾಘಟನಯಾ । ವಿವಿಧ ಜಂತು ವ್ರಾತಭುವನ ಮಗ್ನೌಕರಣ ನವನವಪ್ರಿಯ ಗುಣಾರ್ಣವ ನಾರಸಿಂಹಾ ॥ ದಾರುಣೋಜ್ಜ್ವಲ ಧಗದ್ಧಗಿತ ದಂಷ್ಟ್ರಾನಲ ವಿ- ಕಾರ ಸ್ಫುಲಿಂಗ ಸಂಗಕ್ರೀಡಯಾ । ವೈರಿದಾನವ ಘೋರವಂಶ ಭಸ್ಮೀಕರಣ- ಕಾರಣ ಪ್ರಕಟ ವೇಂಕಟ ನಾರಸಿಂಹಾ ॥
Browse Related Categories: