View this in:
English Devanagari Telugu Tamil Kannada Malayalam Gujarati Odia Bengali  |
Marathi Assamese Punjabi Hindi Samskritam Konkani Nepali Sinhala Grantha  |
This document is in ಶುದ್ಧ ಕನ್ನಡ with the right anusvaras marked. View this in ಸರಳ ಕನ್ನಡ, with simplified anusvaras for easier reading.

ಭಾಗ್ಯದಾ ಲಕ್ಷ್ಮೀ ಬಾರಮ್ಮಾ


ರಾಗಮ್: ಶ್ರೀ (ಮೇಳಕರ್ತ 22 ಖರಹರಪ್ರಿಯ ಜನ್ಯರಾಗ)
ಆರೋಹಣ: ಸ ರಿ2 ಮ1 ಪ ನಿ2 ಸ
ಅವರೋಹಣ: ಸ ನಿ2 ಪ ದ2 ನಿ2 ಪ ಮ1 ರಿ2 ಗ2 ರಿ2 ಸ

ತಾಳಮ್: ಆದಿ
ರೂಪಕರ್ತ: ಪುರನ್ಧರ ದಾಸ
ಭಾಷಾ: ಕನ್ನಡ

ಪಲ್ಲವಿ
ಭಾಗ್ಯದಾ ಲಕ್ಷ್ಮೀ ಬಾರಮ್ಮಾ
ನಮ್ಮಮ್ಮ ನೀ ಸೌ-ಭಾಗ್ಯದಾ ಲಕ್ಷ್ಮೀ ಬಾರಮ್ಮಾ ॥

ಚರಣಂ 1
ಹೆಜ್ಜೆಯೆ ಮೇಲೇ ಹೆಜ್ಜೆಯ ನಿಕ್ಕುತ
ಗೆಜ್ಜೆ ಕಾಲ್ಗಳಾ ಧ್ವನಿಯ ತೋರುತ (ಮಾಡುತ)
ಸಜ್ಜನ ಸಾಧೂ ಪೂಜೆಯ ವೇಳೆಗೆ
ಮಜ್ಜಿಗೆಯೊಳಗಿನ ಬೆಣ್ಣೆಯನ್ತೆ ॥
(ಭಾಗ್ಯದಾ)

ಚರಣಂ 2
ಕನಕಾವೃಷ್ಟಿಯ ಕರೆಯುತ ಬಾರೇ
ಮನಕಾಮನೆಯಾ ಸಿದ್ಧಿಯ ತೋರೆ ।
ದಿನಕರಕೋಟೀ ತೇಜದಿ ಹೊಳೆಯುವ
ಜನಕರಾಯನಾ ಕುಮಾರಿ ಬೇಗ ॥
(ಭಾಗ್ಯದಾ)

ಚರಣಂ 3
ಅತ್ತಿತ್ತಗಳದೆ ಭಕ್ತರ ಮನೆಯಲಿ
ನಿತ್ಯ ಮಹೋತ್ಸವ ನಿತ್ಯ ಸುಮಙ್ಗಲ ।
ಸತ್ಯವ ತೋರುವ ಸಾಧು ಸಜ್ಜನರ
ಚಿತ್ತದಿ ಹೊಳೆಯುವ ಪುತ್ಥಳಿ ಬೊಮ್ಬೆ ॥
(ಭಾಗ್ಯದಾ)

ಚರಣಂ 4
ಸಙ್ಖ್ಯೇ ಇಲ್ಲದ ಭಾಗ್ಯವ ಕೊಟ್ಟು
ಕಙ್ಕಣ ಕೈಯಾ ತಿರುವುತ ಬಾರೆ ।
ಕುಙ್ಕುಮಾಙ್ಕಿತೆ ಪಙ್ಕಜ ಲೋಚನೆ
ವೇಙ್ಕಟ ರಮಣನ ಬಿಙ್ಕದರಾಣೀ ॥
(ಭಾಗ್ಯದಾ)

ಚರಣಂ 5
ಸಕ್ಕೆರೆ ತುಪ್ಪದ ಕಾಲುವೆಹರಿಸಿ
ಶುಕ್ರವಾರದಾ ಪೂಜೆಯ ವೇಳೆಗೆ ।
ಅಕ್ಕೆರೆಯುಳ್ಳ ಅಳಗಿರಿ ರಙ್ಗನ
ಚೊಕ್ಕ ಪುರನ್ದರ ವಿಠ್ಠಲನ ರಾಣೀ ॥
(ಭಾಗ್ಯದಾ)




Browse Related Categories: