(ಶ್ರೀ ಪುರನ್ದರದಾಸರು)
ಗುರುವಿನ ಗುಲಾಮನಾಗುವ ತನಕ
ದೊರೆಯದಣ್ಣ ಮುಕುತಿ
ಪರಿ ಪರಿ ಶಾಸ್ತ್ರವನೋದಿದರೇನು
ವ್ಯರ್ಥವಾಯ್ತು ಭಕುತಿ
ಆರು ಶಾಸ್ತ್ರವ ಓದಿದರಿಲ್ಲ
ಮೂರು ಪುರಾಣವ ಮುಗಿಸಿದರಿಲ್ಲ
ಸಾರ ನ್ಯಾಯ ಕಥೆಗಲ ಕೇಲಿದರಿಲ್ಲ
ಧೀರನಾಗಿ ತಾ ಪೇಲಿದರಿಲ್ಲ
ಕೊರಲೊಲು ಮಾಲೆ ಧರಿಸಿದರಿಲ್ಲ,
ಬೆರಲೊಲು ಜಪಮಣಿ ಎಣಿಸಿದರಿಲ್ಲ
ಮರುಲನಾಗಿ ಶರೀರಕೆ ಬೂದಿ
ಒರೆಸಿಕೊಣ್ಡು ತಾ ತಿರುಗಿದರಿಲ್ಲ
ನಾರಿಯ ಭೋಗ ಅಲಿಸಿದರಿಲ್ಲ
ಶಾರೀರಿಕ ಸುಖವ ಬಿಡಿಸಿದರಿಲ್ಲ
ನಾರದವರದ ಪುರನ್ದರ ವಿಠ್ಠಲನ
ಸೇರಿಕೊಣ್ಡು ತಾ ಪಡೆಯುವ ತನಕ